Tuesday, March 15, 2011

namma aadyategalu sariyaagiveye?

ಇತ್ತೀಚಿಗೆ ಹೈದರಾಬಾದ್ ಕರ್ನಾಟಕದ ಜನ ತಮ್ಮ ಬೇಡಿಕೆಗಳಿಗಾಗಿ ಹಕ್ಕೊತ್ತಾಇಸುತ್ತಿರುವುದು ಸ್ವಾಗತಾರ್ಹ ವಿಷಯ. ಇದಕ್ಕಾಗಿ ಚೇಂಬರ್ ಆಫ್ ಕಾಮರ್ಸ್ ಆದಿಯಾಗಿ ಎಲ್ಲ ಸಂಘಟನೆಗಳು ಕೈ ಜೋಡಿಸುತ್ತಿರುವುದು ಸಂತೋಷದ  ವಿಷಯವೇ ಸರಿ.
ಆದರೆ ನಮ್ಮ ಆದ್ಯತೆಗಳು ಸರಿಯಾಗಿವೆಯಾ ಎಂಬುದೊಂದು ಪ್ರಶ್ನೆ!
    ಕೇಂದ್ರೀಯ ವಿಶ್ವವಿದ್ಯಾಲಯ ಆಯಿತು. ಕೇಂದ್ರೀಯ ಮೆಡಿಕಲ್ ಕಾಲೇಜು ಆಗುತ್ತಿದೆ. ಗುಲಬರ್ಗಾದಲ್ಲಿ ಐಐ ಐ ಟಿ ಮತ್ತು ರಾಯಚೂರಿನಲ್ಲಿ ಐ ಐ ಟಿ  ಸ್ವಲ್ಪ ಪ್ರಯತ್ನ ಪಟ್ಟರೆ ಆಗಬಹುದು. ಆದರೆ ಈ ಎಲ್ಲ ಸಂಸ್ಥೆ ಗಳು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸಿ ದೇಶದ ವಿವಿಧ  ಭಾಗಗಳಿಂದ ವಿದ್ಯಾರ್ಥಿ ಗಳನ್ನೂ ಆಯ್ಕೆ ಮಾಡಿ ಅವರಿಗೆ ಎಲ್ಲವನ್ನು ಕಲಿಸಿ ಅವರು ಅಮೇರಿಕ ಕ್ಕೆ  ವಲಸೆ ಹೋಗಲು ಸಹಾಯ ಮಾಡಬಹುದು ಅಷ್ಟೇ!  ಇದರಿಂದ ನಮ್ಮ ಭಾಗದ ವಿದ್ಯಾರ್ಥಿ ಗಳಿಗೆ  ಎಷ್ಟು ಉಪಯೋಗವಾಗಬಹುದು! ಈಗ ನಮ್ಮ  ಭಾಗದ ವಿದ್ಯಾರ್ಥಿಗಳು ಎಷ್ಟು ಸಂಖ್ಯೆ ಯಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಗಳಲ್ಲಿ ಪಾಸಾಗುತ್ತಿದ್ದಾರೆಂದು ಎಲ್ಲರಿಗೂ ಗೊತ್ತೇ ಇದೆ. 

      ಹೀಗಿರುವಾಗ , ಈ ಎಲ್ಲ ಹೋರಾಟಗಾರರು ಈ ಕೆಳಗಿನ  ಸಂಗತಿಗಳನ್ನು ಗಮನಿಸಲಿ:

    ಈ ಭಾಗದಲ್ಲಿ ಗಣಿತ ಮತ್ತು ವಿಜ್ಞ್ಯಾನ ಕಲಿಸುವ ಯೋಗ್ಯತೆ ಮತ್ತು ಪ್ರವೃತ್ತಿ ಉಳ್ಳ ಶಿಕ್ಷಕರ ಕೊರತೆ ಇದೆ.
    
    ಈ ಭಾಗದಲ್ಲಿ  ತಮ್ಮ ಸ್ವಂತ ಇಚ್ಚೆ ಇಂದ ಇಂಗ್ಲಿಷ್ ಕಲಿಸುವ, ವಿದ್ಯಾರ್ಥಿ ಗಳೊಂದಿಗೆ ತಪ್ಪಿಲ್ಲದೆ ಇಂಗ್ಲಿಷ್ ಮಾತನಾಡಬಲ್ಲ ಯೋಗ್ಯತೆ ಇರುವ  ಇಂಗ್ಲಿಷ್ ಶಿಕ್ಷಕರಿಲ್ಲ. 
   
    ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವದೊಂದನ್ನು ಬಿಟ್ಟು  ಉಳಿದ ಎಲ್ಲ  ಕೆಲಸ ಮಾಡುವ ಶಿಕ್ಷಕರಿದ್ದು , ನಿಜವಾಗಿಯೂ ಪಾಠ ಹೇಳುವ ಯೋಗ್ಯತೆ ಮತ್ತು ಇಚ್ಚೆ ಉಳ್ಳವರನ್ನು ಮಾತ್ರ ಶಿಕ್ಷಕರಾಗಿ ನೇಮಿಸುವ ಅವಶ್ಯಕತೆ ಇದೆ.

    ಈ ಮೂಲಭೂತ ಸೌಕರ್ಯ ಗಳಿಗಾಗಿ ಹೋರಾಟ ನಡೆಯಲಿ.  
    
    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಗಳನ್ನೂ ಸ್ಥಾಪಿಸಿ ಅವುಗಳಿಗೆ ಎಲ್ಲೆಲ್ಲಿಂದಲೋ  ವಿದ್ಯಾರ್ಥಿಗಳನ್ನು 
    ಆಯ್ಕೆ ಮಾಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ನಮ್ಮ ಹುಡುಗರು ಕೇವಲ ಅವರತ್ತ ಆಸೆಯ ಕಣ್ಣು ಗಳಿಂದ ನೋಡುತ್ತಾ ತಮ್ಮ ಬಗ್ಗೆಯೇ ಕೀಳರಿಮೆ ಇಂದ ಬಾಳುವಂತೆ , ಬೇರೆಯವರು ಕೂರುವ ಪಲ್ಲಕ್ಕಿಯನ್ನು ಹೊರುವ ಹಾಗೆ ಮಾಡದೆ ನಮ್ಮವರೂ ಪಲ್ಲಕ್ಕಿಯಲ್ಲಿ ಕೂಡುವ ಯೋಗ್ಯತೆಯನ್ನು ಗಳಿಸಲು ಏನು ಮಾಡಬೇಕು ಎಂಬುದನ್ನು ವಿಚಾರಿಸಲಿ.

    ಈ ಸಂಸ್ಥೆಗಳು ನಮ್ಮ ನೆಲ,ಜಲ ವನ್ನು ಬಳಸಿ ಯಾರನ್ನೋ ಉದ್ಧಾರ ಮಾಡುವ ಬದಲು ಅವುಗಳಲ್ಲಿ ಪ್ರವೇಶ ಪಡೆಯುವ ಯೋಗ್ಯತೆಯನ್ನು ನಮ್ಮ ಮಕ್ಕಳಲ್ಲಿ ಬೆಳೆಸಿದರೆ  ಈ ಸಂಸ್ಥೆ ಗಳು ಎಲ್ಲಿಯೇ ಇರಲಿ ಅವುಗಲ್ಲಿ ಪ್ರವೇಶ ಪಡೆಯುತ್ತಾರೆ. 

    ಆದ್ದರಿಂದ ನಮ್ಮ ಪ್ರಯತ್ನ ಮೊದಲು ನಮ್ಮ ಹುಡುಗರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸಗಳತ್ತ ಇರಲಿ. ನಂತರ ಐ ಐ ಐ ಟಿ ಯನ್ನು ಪಡೆಯಬಹುದು 



ಹೆಸರು: ಭೀಮರಾವ ಗರೂರ 
ವಿಳಾಸ: ಮ. ನಂ.೮-೧೧೫೫, ಆಸಫ್ ಗಂಜ್, ಗುಲಬರ್ಗ.









No comments:

Post a Comment